Index   ವಚನ - 137    Search  
 
ಲೋಕವಿರಹಿತ ಶರಣ, ಶರಣವಿರಹಿತ ಲೋಕ. ಏಕಾರ್ಥಕಾಗಿ ಉತ್ತರ ಪ್ರತಿ ಉತ್ತರ. ಲೋಕರ್ಥ ಹಿಂಗುವುದು, ಲೋಭತ್ವ ಬಿಡುವುದು ಮಲಸಂಬಂಧವ. ಸಾಕ್ಷಿದೋರವುದು ಸುಳುಹ ಸೂಕ್ಷ್ಮದಲಿ. ವಾಕ್ ಪರುಷವಪ್ಪುದು ವಸ್ತುವಿನ ನಿಶ್ಚಯದಿಂದ, ಬೇಕು ಬೇಕು ಎಂಬರೆ ವಚನಾರ್ಥದಲ್ಲಿ, ಸಾಕ್ಷಿ ಕಾಂಬುದು, ನೀಕರಿಸಿ ಕುಲವಂ ಜರಿದು ಅಚಲಪದವನೆಯ್ದುವುದು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.