Index   ವಚನ - 267    Search  
 
ನಾನು ಭಕ್ತ, ನಾನು ಮಹೇಶ್ವರ ನಾನು ಪ್ರಸಾದಿ, ನಾನು ಪ್ರಾಣಲಿಂಗಿ ನಾನು ಶರಣನೆಂಬ ನಾಣ್ಣುಡಿಯುಂಟೆ? ಜ್ಞಾನದ ವಸ್ತು ಜ್ಞಾನಕ್ಕಲ್ಲದೆ ಅಜ್ಞಾನಿಗಹುದೆ? ಮಾನಗಂಡುಗ ಬೆಳೆದ ಬೀಜ [ನುಶಿಯಕ್ಕೆ] ಅಲ್ಲದೆ ಆಶನಕ್ಕಹುದೆ? ನಾನೆಂಬ ಗರ್ವವ ಸುಟ್ಟು ನಿಗರ್ವಿ ಆದಲ್ಲದೆ, ತಾನೆ ತಾನಾಗಲರಿಯದ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.