Index   ವಚನ - 340    Search  
 
ನಿಂದೆ ವಂದನೆ ತಂದಿಟ್ಟಿರಿ, ಜಗಕೆ ದ್ವಂದ್ವವ ಕೂಡಿಸಿ ಕುಂದುಕೊರತೆ ನಿಮಗಿಲ್ಲವು. ಸಂದೇಹಿ ಜಗದೊಳೆಲ್ಲ ಮಂದಮತಿ ಮಾನವರಿದರೊಳು, ಸಂದುಸಂಶಯವ ಮಾಡತಲಿಪ್ಪರು ಹೆದರುತ ಮನದೊಳು, ಎಂದೆಂದು ಈ ಕ್ರೋಧದಲ್ಲಿ ಬೆಂದುಹೋಪುದಯ್ಯ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.