ಶಕ್ತಿಯೆ ಅಧೋಮುಖಿಯಾಗಿಹುದು
ಭಕ್ತಿಯೆ ಊರ್ಧ್ವ ಮೂಖಿಯಾಗಿಹುದು.
ಶಕ್ತಿಯೆ ಮಾಯೆಯ ಕೂಡಿಕೊಂಡಿಹುದು
ಭಕ್ತಿಯೆ ಮಾಯೆ ವಿರಹಿತವಾಗಿಹುದು
ತರ್ಕ ಪ್ರಮಾಣದಿಂದ ನೋಡಲು
ಶಕ್ತಿಯಿಂದಲೂ ಭಕ್ತಿಯೆ ಅಧಿಕವಯ್ಯಾ ಶಾಂತವೀರೇಶ್ವರಾ
Art
Manuscript
Music
Courtesy:
Transliteration
Śaktiye adhōmukhiyāgihudu
bhaktiye ūrdhva mūkhiyāgihudu.
Śaktiye māyeya kūḍikoṇḍ'̔ihudu
bhaktiye māye virahitavāgihudu
tarka pramāṇadinda nōḍalu
śaktiyindalū bhaktiye adhikavayyā śāntavīrēśvarā