Index   ವಚನ - 54    Search  
 
ಆ ಪೂರ್ವೋಕ್ತಾಗಮಂಗಳಲ್ಲಿಯು ವಾಮಾಗಮವೆಂದು ದಕ್ಷಿಣಾಗಮವೆಂದು ಮಿಶ್ರಾಗಮವೆಂದು ಸಿದ್ಧಾಂತವೆಂಬ ಹೆಸರುಳ್ಳದೆಂದು ನಾಲ್ಕು ಭೇದ ಉಳ್ಳುದಾಗಿ ಸಮಸ್ತಾಗಮಜ್ಞರಿಂದ ನಿಶ್ಚಿತವಾಗಿದೆ. ಅದೆಂತೆಂದೊಡೆ: ಸಾಕ್ಷಿ: “ತೇಷು ಶೈವಂ ಚತಿರ್ಭೇದಂ ಶೈವತಂತ್ರ ಸರ್ವ ನಿಶ್ಚಿತಂ| ವಾಮಂ ಚ ದಕ್ಷಿಣಾಂ ಚೈವ ಮಿಶ್ರಂ ಸಿದ್ಧಾಂತ ಸಂಜ್ಞಕಂ” ಎಂದುದಾಗಿ ಶಾಂತವೀರೇಶ್ವರಾ ಸೂತ್ರ: ಆ ವಾಮಾದ್ಯಾಗಮಗಳ ಲಕ್ಷಣವನ್ನು ಹೇಳಿ ಸಿದ್ಧಾಂತವು ವೇದ ಸಮ್ಮತವೆಂದು ತೋರಿಸುತಿರ್ದಪಂ.