Index   ವಚನ - 53    Search  
 
ಆ ಪರಬ್ರಹ್ಮ ಸ್ವರೂಪವಾದ ಶಿವನಿಂದೆ ಶೈವಾಗಮವು ಪಾಶುಪಾತಗಮವೆಂದು ಸೋಮಾಗಮವೆಂದು ಲಾಕುಳಾಗಮವೆಂದು ಅನೇಕ ಭೇದವಾಗಿ ಹೇಳುವರು. ಅದಕ್ಕೆ ಸಾಕ್ಷಿ: “ಅಗಮಂ ಬಹುಧಾಃ ಪ್ರೋಕ್ತಾ ಶಿವೇನ ಪರಮಾತ್ಮನಾ| ಶೈವಂ ಪಾಶುಪತಂ ಸೋಮಂ ಲಾಕುಳಂ ಚ್ಛೇತಿ ಭೇದತಃ” ಎಂದುದಾಗಿ ಶಾಂತವೀರೇಶ್ವರಾ ಸೂತ್ರ: ಆ ಆಗಮಂಗಳೊಳಗೆ ಮೊದಲಾದ ಶೈವಾಗಮ ಭೇದಂಗಳ ಪೇಳುತ್ತಿರ್ದಪಂ.