Index   ವಚನ - 56    Search  
 
ಸಿದ್ಧಾಂತವೆಂಬ ಹೆಸರುಳ್ಳ ಶಿವಾಗಮವು ವೇದೋಕ್ತವಾದ ಧರ್ಮವನೆ ಹೇಳುವ ಕಾರಣವಾಗಿ ವೇದಂಗಳಿಗೆ ಬಾಹ್ಯವಾದ ಜೈನ ಬೌದ್ಧ ಚಾರ್ವಾಕ ಮತಂಗಳಿಗೆ ವಿರೋಧಿಯಾದ ಕಾರಣವಾಗಿ ವೇದ ಸಮ್ಮತವೆಂದು ಹೇಳತ್ತಿರ್ಪುದು ಅದೆಂತೆಂದೊಡೆ: ಸಾಕ್ಷಿ: ವೇದ ಧರ್ಮಾಭಿದಾಯಿತ್ವ| ಸಿದ್ಧಾಂತಾಖ್ಯಃ ಶಿವಾಗಮ||| ವೇದ ಧರ್ಮಾಭಿದಾಯಿತ್ವಃ ಶಿವಾಗಮಃ| ವೇದ ಬಾಹ್ಯ ವಿರೋಧಿತ್ವಾ| ದ್ವೇದ ಸಮ್ಮತ ಉಚ್ಯತೆ|| ಎಂದುದಾಗಿ ಶಾಂತವೀರೇಶ್ವರಾ ಸೂತ್ರ: ಆ ಶಿವ ಪ್ರಣೀತವಾದ ವೇದ ಸಿದ್ಧಾಂತಗಳಿಗೆ ಕಾರಣ ಪೂರ್ವಕನಾಗಿ ಐಕ್ಯವನು ತೋರಿಸುತಿರ್ದಪಂ.