ವೇದ ಸಿದ್ಧಾಂತಗಳಗೆ
“ಏಕಾರ್ಥಂ ಪ್ರತಿಪಾದನಾತ್ ಸರ್ವವೇದೇಷು ಯ ದೃಷ್ಟಂ ತತ್ಸರ್ವಂತು
ಶಿವಾಗಮೆ” ಎಂಬುದಾಗಿ ‘ವೀರಾಗಮ’ ವಾಕ್ಯ ಉಂಟಾಗಿ
ಒಂದೇ ಅರ್ಥವನು ಪ್ರತಿಪಾದಿಸುವುದರ ದೆಸೆಯಿಂದ ಏಕಾರ್ಥವು.
ಈ ವೇದ ಸಿದ್ಧಾಂತಗಳ ಪ್ರಮಾಣವು ಸಮಾನವಾಗಿದ್ದುದಾಗಿ
ವೇದಗಮ ಜ್ಞಾನಿಗಗಳಾದ ವಿದ್ವಾಂಸರಿಂದೆ
ಎಲ್ಲಾ ಕಾಲದಲ್ಲಿಯೂ ಅರಿಯಲು ಯೋಗ್ಯವು.
ಇದಕ್ಕೆ “ತಾತ್ಪರ್ಯ ಸಂಗ್ರಹ”ದಲ್ಲಿ,
“ವೇದಾಃ ಪ್ರಮಾಣಮಿತಿ ನಂಗೀರ ಮಾಣಿ ಏವಂ ದಿವ್ಯಂತದಾಗಮ
ಮವ್ಯೇತಿ ಜನ ಪ್ರಮಾಣಾ” ಎಂಬ ವಾಕ್ಯದಿಂದೆ,
ಸಮಸ್ತ ಸಮಯಂಗಳಿಗುತ್ತರವಾದ ವೇದಗಮ ಪ್ರಮಾಣ್ಯವನ್ನು
ನಿಶ್ಚೈಸೂದು. ಅದೆಂತೆಂದೊಡೆ:
“ವೇದ ಸಿದ್ಧಾಂತರೋರೈಕ್ಯ ಮೇಕಾರ್ಥ ಪ್ರತಿಪಾದನಾತ್| ಪ್ರಮಾಣಂ
ಸದೃಶಂ ಜ್ಞೇಯಂ| ಪಂಡಿತೈರೇತಯ ಸದಾ||” ಎಂದುದಾಗಿ
ಶಾಂತವೀರೇಶ್ವರಾ
ಸೂತ್ರ: ಈ ಪ್ರಕಾರದಿಂದ ವೇದಾಗಮೈಕ್ಯವನು ಪ್ರತಿಪಾದಿಸಿ ಇನ್ನು ಶಿವ
ಸಿದ್ಧಾಂತದ ಉತ್ತರ ಪಕ್ಷದಲ್ಲಿ ವೀರಶೈವ ಮತವನ್ನು ತೋರಿಸುತಿರ್ದಪಂ.