Index   ವಚನ - 60    Search  
 
ಶಿವ ಬ್ರಾಹ್ಮಣರೆನಿಸಕೊಂಬ ಆ ಬ್ರಾಹ್ಮಣರುಗಳು ಆದಿಶೈವರೆನಿಸಿಕೊಂಬರು. ಅವರಾರೆಂದೊಡೆ: ಶ್ಲೋಕ : “ಕೌಶಿಕಃ ಕಾಶ್ಯಪಶೈವ| ಭಾರದ್ವಾಜಾತಿ ರೇವಚಗೌತಮ ಶ್ಚೇತಿ ಪಂಚೈತಿ| ಪಂಚವಕ್ತ್ರೇಷು ದೀಕ್ಷಾತಾಃ ಏತೇಷಾಂ ಋಷಿ ವಂಶೇಷು| ಜಾತಸ್ತೇಷು ಶಿವದ್ವಿಜಾಃ|” ಕಾಮಿಕ ಮೊದಲಾದ ಇಪ್ಪಂತೆಂಟಾಗಮಗಳಲ್ಲಿ ಶಿವಲಿಂಗ ಪ್ರತಿಷ್ಠೆ ಮೊದಲಾಗಿ ನಿತ್ಯೋತ್ಸವ ಕಡೆಯಾದುದನು; ನಿತ್ತೋತ್ಸವ ಮೊದಲಾಗಿ ಪ್ರಾಯಶ್ಚಿತ್ತಂಗಳೆ ಕಡೆಯಾಗಿಹಂಥದನು ಅರಿದು ಸರ್ವವನು ಆಚರಿಸೂದು, ಶಿವಾದಿ ಮಂತ್ರಂಗಳಿಂದವು ಆಯಾ ಮಂತ್ರಂಗಳ ಯಂತ್ರ ಕ್ರಿಯಂಗಳಿಂದವೂ ಮಹಾಮುದ್ರೆ ಮೊದಲಾದ ಮುದ್ರೆಗಳಿಂದವೂ ಷಡಂಗ ಮೊದಲಾದ ನ್ಯಾಸಗಳಿಂದವೂ ಆಹ್ವಾನ ಸ್ಥಾಪನ ಸನ್ನಿರೋಧನ ಮೊದಲಾದವುಗಳಿಂದವೂ ಷೋಡಶೋಪಚಾರ ಮೊದಲಾದ ಉಪಚಾರಣಗಳಿಂದವೂ ಲಿಂಗವನು ಸಿಂಹಾಸನದಲ್ಲಿ ಪೂಜಿಸುವದಯ್ಯ ಶಾಂತವೀರೇಶ್ವರಾ