Index   ವಚನ - 62    Search  
 
ಶಿವಮಂತ್ರ ಪಿಂಡವಪ್ಪ ತನ್ನ ಹೃದಯ ಕಮಲದಲ್ಲಿ ಆಹ್ವಾನದ ದೆಸೆಯಿಂದ ಸಂಯುಕ್ತವಾದ ಶಿವಲಿಂಗದಲ್ಲಿ ಮಂತ್ರ ಪತಿಯಪ್ಪ ವರ್ಣವಾಸ ಮೊದಲಾಗಿ ಶಿವವಾಸ ಪರ್ಯಂತರವಾದ ವಾಸದಿ ಮಂತ್ರದ ಭಾವದಿಂದ ಲಿಂಗ ಪೂಜೆಯಧಿಕವಪ್ಪುದು. ಅಂತರಂಗಾರ್ಚನೆಯ ಮಾಡುವ ಶುದ್ಧಶೈವನು ಮಂತ್ರ ಸ್ವರೂಪವಾದ ಶರೀರಯಹನು. ಅಂತದರಿಂದಾತನು ಪರಮ ಶಿವನಪ್ಪನು. ಈ ಪ್ರಕಾರದಿಂದ ಶುದ್ಧಶೈವವು ನಿರೂಪಿತವಾಯಿತಯ್ಯ ಶಾಂತವೀರೇಶ್ವರಾ ಸೂತ್ರ: ಅಲ್ಲಿಂದ ಮೇಲೆ ವೀರಶೈವವೆಂತೆಂದೊಡೆ, ಈ ಪ್ರಕಾರದಿಂದ ಹೇಳಲಾದ ಷಡ್ದರ್ಶನ ಷಟ್ಯೈವಕ್ಕತೀತವಾದ ವೀರಶೈವವು ಹೇಗೆಂದರೆ, ಈ ಪ್ರಕಾರದಿಂ ವೇದಾಗಮೈಕ್ಯವನು ಪ್ರತಿಪಾದಿಸಿ, ಇನ್ನು ಶಿವಸಿದ್ಧಾಂತದ ಉತ್ತರ ಪಕ್ಷದಲ್ಲಿ ವೀರಶೈವ ಮತವನು ತೋರಿಸುತಿರ್ದಪಂ.