Index   ವಚನ - 63    Search  
 
ಶಿವನಿಂ[ದವೆ] ಹೇಳಲಾದ ಕಾಮಿಕಾಗಮವೆ ಮೊದಲಾದ ವಾತೂಲಾಗಮವೆ ಕಡೆಯಾಗುಳ್ಳ ಸಿದ್ಧಾಂತವೆಂಬ ಹೆಸರುಳ್ಳ ಮಹಾಶಿವಾಗಮದಲ್ಲಿಯ ಉತ್ತರ ಪಕ್ಷದಲ್ಲಿ ಸಮೋತ್ಕೃಷ್ಟವಾದ ವೀರಶೈವ ಮತವು ನಿಶ್ಚಯವಾಗಿಹುದು. ಅದೆಂತೆಂದೊಡೆ: “ಸಿದ್ಧಾಂತಾಖ್ಯೆ ಮಹಾಮಂತ್ರೆ ಕಾಮಿಕಾದೆ ಶಿವೋದಿತೆ ನಿರ್ದಿಷ್ಟಮುತ್ತರ ಭಾಗ ವೀರಶೈವ ಮತಂ ಪರಂ||” ಇಂತೆಂದುದಾಗಿ ಶಾಂತವೀರೇಶ್ವರಾ ಸೂತ್ರ: ಬಳಿಕ ವೇದ ಶಿರಸ್ಸಿನಲ್ಲಿ ವೀರಶೈವ ಶಬ್ಚವನು ತೋರುತಿರ್ದಪಂ.