Index   ವಚನ - 65    Search  
 
ಲಿಂಗರೂಪವಾದ ಶಿವಜೀವೈಕ್ಯರನು ಬೋಧಿಸುತಿರ್ದ ವಿದ್ಯೆಯು ‘ವಿ’ ಎಂಬ ಶಬ್ದದಿಂದ ಹೇಳಲಾಗುತ್ತಿಹುದು. ಆ ವಿದ್ಯೆಯಲ್ಲಿ ಆರು ಕೆಲಂಬರು ಶಿವ ಭಕ್ತರು ಕ್ರೀಡಿಸುತಿರ್ದಪರು. ಅವರು ವೀರಶೈವರೆಂದು ಸಮ್ಮತರು. ಅದೆಂತೆಂದೊಡೆ, ಸಾಕ್ಷಿ ಗ್ರಂಥ: ‘ವಿ’ ಶಬ್ದೇನೋಚ್ಯತೆ ವಿದ್ಯಾ| ಶಿವಜೀವೈಕ್ಯ ಬೋಧಿತಾ|| ತಸ್ಯಾಂ ರಮಂತಯೇ ಶೈವಾ| ವೀರಶೈವಾ ಸ್ತುತೇ ಮತಾ||” ಎಂದು ಶಾಂತವೀರೇಶ್ವರಾ ಸೂತ್ರ:ಬಳಿಕ ವೀರಮಾಹೇಶ್ವರ ಶಬ್ದ ನಿರ್ವಚನವನು ತೋರುತಿರ್ದಪಂ.