ಶಿವಸ್ವರೂಪವಾಗಿರ್ದ
“ವಿದ್ಯಾಯಾಂ ವಿದ್ಯ ವೇದ ವಾಕ್ಯಜಾ” ಎಂದು ಸೂತ್ರೋಕ್ತಿಯುಂಟಾಗಿ
ವೇದ ಶಿರಸ್ಸಿನಲ್ಲಿ ಹುಟ್ಟಿದ ವಿದ್ಯೆಯಲ್ಲಿ ಅಧಿಕವಾಗಿ
ಅವುದಾನೊಂದು ಕಾರಣವಾಗಿ ಕ್ರೀಡಿಸುವತನ ಉಂಟು.
ಅದು ಕಾರಣವಾಗಿ ಇವರು ಶ್ರೇಷ್ಠವಾದ ವೀರಶೈವರೆಂದು ನೆನೆಯುವರು.
ಅದಕ್ಕೆ ದೃಷ್ಟಾಂತಂ:
“ವಿದ್ಯಾಯಾಂ ಶಿವರೂಪಾಯಾಂ| ವಿಶೇಷಾದ್ರಮಣಾಯತಃ|
ತಸ್ಯಾದೇತೇ ಮಹಾಭಾಗ| ವೀರಶೈವ ಇತಿ ಸ್ಮೃತಾ|||”
ಎಂದುದಾಗಿ ಶಾಂತವೀರೇಶ್ವರಾ
ಸೂತ್ರ: ಬಳಿಕ ವೇದಾಗಮ ಶಿರಸ್ಸಿನಲ್ಲಿಯೂ ವೀರಶೈವ ಶಬ್ದ ನಿರ್ವಚನವನು ತೋರುತಿರ್ದಪಂ.