Index   ವಚನ - 66    Search  
 
ಆವುದಾನೊಂದು ಕಾರಣವಾಗಿ ಶಿವ ಜೀವೈಕ್ಯ ರೂಪವಾದ ವಿದ್ಯೆಯಲ್ಲಿ ಕ್ರೀಡಿಸುತಿರ್ದಪನು ಜಗತ್ಪ್ರಪಂಚ ರೂಪವಾದ ಮಾಯೆಯನ್ನು ಬಿಡಲು ಯೋಗ್ಯವಾಗಿರ್ದವನಾಗಿ, ‘ಅನೇನ ನಿರುಕ್ತಿನೈಮಯಿ’ ಪದದ ಮೊದಲಕ್ಷರವಾದ ನಿರುಕ್ತಿಯಿಂದಮೆ ವೀರ ಮಾಹೇಶ್ವರನೆಂದು ಅನ್ವರ್ಥ ನಾಮವುಳ್ಳಾತನನ್ನಾಗಿ ನೆನೆಯುವರಯ್ಯ ಶಾಂತವೀರೇಶ್ವರಾ ಸೂತ್ರ: ಅನಂತರದಲ್ಲಿ ವೇದಾಂತ ಸಿದ್ಧಾಂತವಾದ ‘ವೀರ’ ಶಬ್ದ ಸಿದ್ಧಾಂತ ಪ್ರಸಿದ್ಧವಾದ ‘ಶೈವ’ ಶಬ್ದ ‘ಮಾಹೇಶ್ವರ’ ಶಬ್ದಂಗಳನು ಹೇಳಿ ಬಳಿಕ ವೇದಾಗಮ ಶಿರಸಿದ್ಧವಾದ ವೀರಮಾಹೇಶ್ವರ ವೀರಶೈವ ಶಬ್ದಂಗಳನು ಷಟ್ಸೂತ್ರಂಗಳಿಂದ ಹೇಳುತಿರ್ದಪಂ.