Index   ವಚನ - 120    Search  
 
ಶಿವಕಲಾ ಪೂರಿತವಾದ ಲಿಂಗದಲ್ಲಿ ಶಿಷ್ಯನು ಜೀವಕಲೆಯಾದ ಪ್ರಾಣವನು ಪ್ರತಿಷ್ಠಿಸುವದು. ಆ ಶಿವಕಲಾ ಪೂರಿತವಾದ ಲಿಂಗವನು ಆ ಶಿಷ್ಯನು ಪ್ರಣವ ಸ್ವರೂಪವಾಗಿ ಜೀವಕಲೆಯಾದ ಪ್ರಾಣದಲ್ಲಿ ಐಕ್ಯ ಸ್ವರೂಪಿನಿಂದ ಆಚಾರ್ಯವನು ಪ್ರತಿಷ್ಠಿಸುವುದು, ಆ ಪ್ರಕಾರದಿಂದ ಲಿಂಗವನು ಜೀವಕಲೆಗಳಿಂದ ಸಮರಸವ ಮಾಡಿ ಶಿಷ್ಯನು ಹಸ್ತಪೀಠದಲಿ ಇರಿಸುವುದಯ್ಯ ಶಾಂತವೀರೇಶ್ವರಾ