Index   ವಚನ - 121    Search  
 
ಈ ಪ್ರಕಾರವಾಗಿ ಲಿಂಗದಲ್ಲಿ ಕಳೆಯ ಸ್ಥಾಪಿಸಿದನಾಗಿ ಆ ಗುರುವಿನ ಹಸ್ತದಿಂದ ಲಿಂಗಕಳೆ ಹುಟ್ಟಿ ಕರಸ್ಥಲಕ್ಕೆ ಇಷ್ಟಲಿಂಗವಾಯಿತ್ತು ಮನಸ್ಥಲಕ್ಕೆ ಪ್ರಾಣಲಿಂಗವಾಯಿತ್ತು ಭಾವ ಭರಿತವಾಗಿ ಭಾವಲಿಂಗವಾಯಿತ್ತು ಆ ಇಷ್ಟಲಿಂಗವೆ ಆಚಾರಲಿಂಗ ಗುರುಲಿಂಗವೆಂದೆರಡಾಯಿತ್ತು. ಆ ಪ್ರಾಣಲಿಂಗವೆ ಶಿವಲಿಂಗ ಜಂಗಮಲಿಂಗವೆಂದರಡಾಯಿತ್ತು. ಆ ಭಾವಲಿಂಗವೆ ಪ್ರಸಾದಲಿಂಗ ಮಹಾಲಿಂಗವೆಂದರಡಾಯಿತ್ತು ಆಚಾರಲಿಂಗ[ದಲ್ಲಿ] ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ ಇಂತೀ ಲಿಂಗಪಂಚಕವು ಆಚಾರಲಿಂಗದಲ್ಲಿಯೇ ಗರ್ಭಿಕೃತವಾಗಿ ಆಚಾರಲಿಂಗವೆಂದು ಕ್ರೀಯಾಲಿಂಗವೆಂದು ಇಷ್ಟಲಿಂಗವೆಂದು ಒಂದೇಪರಿಯಾಗಿ ಕರಸ್ಥಲಕ್ಕೆ ಬಂದಿತ್ತಯ್ಯ ಶ್ರೀ ಗುರು ಶಾಂತವೀರೇಶ್ವರಾ