Index   ವಚನ - 141    Search  
 
ಮರಳಿ ಶುದ್ಧಶೈವನ ಇಷ್ಟಲಿಂಗ ಪತನವಾದೊಡಂ, ಕೆಟ್ಟೊಡಂ ದಗ್ಧವಾದೊಡಂ ಚೋರರಿಂ ಅಪಹರಿಸಲಾದದೊಡಂ, ಮೂಷಕಂ, ಕಾಕ ಶುನಕ ವಾನರಂಗಳಿಂ ಕೊಂಡು ಪೋದೊಡಂ, ಅಘೋರ ಮಂತ್ರವನು ಒಂದು ಲಕ್ಷ ಜಪ ಮಾಡಿ ಶಾಸ್ತ್ರವಿಧಾನದಿಂದ ಆಚಾರ್ಯರಿಂದಪೂರ್ವ ಪ್ರಕಾರದಿಂದಮೆ ಪ್ರತಿಷ್ಠಿಸಿಕೊಂಡು ಲಿಂಗಸಿದ್ಧಿಯನೈಯ್ದಿ ಪೂಜಿಸುವುದು. ಪೀಠಕೆಯಲ್ಲಿ ಈ ಪ್ರಕಾರವೆ ಮಾಡುವುದಯ್ಯ ಶಾಂತವೀರೇಶ್ವರಾ