Index   ವಚನ - 140    Search  
 
ಇಂತು ವೀರಶೈವನ ಲಿಂಗಾಚಾರ ಪೂರ್ವದೊಳು ರೂಪಿತವಾಯಿತು. ಅಗ್ರದೊಳು ಶುದ್ಧಶೈವನ ಲಿಂಗಾಚಾರವೆಂತೆನಲ್ ಶುದ್ಧ ಶೈವ ಕ್ರಮವು: ಲಿಂಗಪತನ ಮೊದಲಾದ ವ್ರತಂಗಳು ಲೋಪವಾಗುತ್ತಿರಲು ತತ್ತಲ್ಲೋಸಾನುಗುಣವಾದ ಪ್ರಾಯಶ್ಚಿತ್ತ ವಿಧಾನದಿಂದ ಓಂ ಪ್ರಸನ್ನ ಸ್ಫುರ| ಘೋರ ಘೋರ| ತಮ ತಮ| ತನು ರೂಪ ತನು ರೂಪ| ಚಲ ಚಲ| ಪ್ರಚಲ ಪ್ರಚಲ| ಕಹ ಕಹ| ವಮ ವಮ| ಬಂಧ ಬಂಧ| ಘತಯ ಘತಯ| ಹುಂ ಫಟ್” ಎಂಬ ಅಘೋರಾಸ್ತ್ರ ಮಂತ್ರ ಯಂತ್ರಗಳ ಆಚರಣೆಯ ದೆಸೆಯಿಂದ ಶುದ್ದವಾಗುತ್ತ ಇಹನಯ್ಯ ಶಾಂತವೀರೇಶ್ವರಾ