Index   ವಚನ - 143    Search  
 
ಮತ್ತಂ, ಲಿಂಗಧಾರಣೋತ್ಕರ್ಷಮೆಂತೆಂದೊಡೆ, ಋಗ್ಯಜುಸ್ಸಾಮಾಥರ್ವಣಂಗಳೆಂಬ ಚತುರ್ವೇದಂಗಳು ಶಿವಲಿಂಗವನು ಧರಸಿಕೊಂಡಿಹವು. ಇಂತೆಂದು ಅಥರ್ವಣವೇದ ನುಡಿಗಂ. ಗ್ರಂಥ: “ಚತುರ್ವೇದ ಲಿಂಗ ಧಾರಯಂತಿ| ಅನಂತಾ ವೈ ವೇದಾಲಿಂಗಂ ಧಾರಯಂತಿ|| ವೇದ ಶಾಸ್ತ್ರ ಪುರಾಣೇಷ| ಕಾಮಿಕಾದ್ಯಾಗಮೇಷು, ಚ ಲಿಂಗದಾರಣಾ ಹೀನಶ್ಚೇ| ಶ್ವಾನ ವನ್ಮತೇ ಮಯಾ” ಎಂದುದಾಗಿ, ವೇದ ಶಾಸ್ತ್ರ ಪುರಾಣಗಳಲ್ಲಿ ಕಾಮಿಕಾದ್ಯಾಗಮಂಗಳಲ್ಲಿ ಪರಿಣಿತರಾಗಿದ್ದರೂ ಲಿಂಗಧಾರಣವಿಲ್ಲ ಎಂದರೆ ಶುನಿಯ ಸಮಾನ ಎಂದು ಈಶ್ವರನು ಹೇಳಿರುವನು ಶಾಂತವೀರೇಶ್ವರಾ