Index   ವಚನ - 271    Search  
 
ಅನಂತರದೋಳೀ ಪಂಚಾಕ್ಷರಾದಿ ಸಕಲ ಮಂತ್ರ ಪುರಶ್ಚರಣ ಪ್ರಾರಂಭದಲ್ಲಿ ಶುಭ ಮಾಸಾದಿ ವಿಧಿಕ್ರಮಂಗಳಂ ವಿಚಾರಿಸಬೇಕಾಗಿಹುದವರಲ್ಲಿ; ಚೈತ್ರ ಮಾಸದಲ್ಲಿ ದುಃಖ, ವೈಶಾಖದಲ್ಲಿ ರತ್ನಲಾಭ, ಜೇಷ್ಠದಲ್ಲಿ ಮೃತ್ಯು, ಅಷಾಢದಲ್ಲಿ ಓದುನಾಶ’ ಶ್ರವಾಣದಲ್ಲಿ ಪೂರ್ಣಾಯ, ಭಾದ್ರಪದದಲ್ಲಿ ಪ್ರಜಾಹಾನಿ, ಆಶ್ವೀಜದಲ್ಲಿ ಸುಲಭ, ಕಾರ್ತೀಕದಲ್ಲಿ ಸರ್ವಸಿದ್ಧಿ, ಮಾರ್ಗಶೀರದಲ್ಲಿ ಮಾಂಗಲ್ಯ, ಪುಷ್ಯದಲ್ಲಿ ಹಾನಿ, ಮಾಘದಲ್ಲಿ ಬುದ್ಧಿ ವೃದ್ಧಿ, ಫಾಲ್ಗುಣದಲ್ಲಿ ಸಕಲ ಸಿದ್ಧಿಗಳಹವೆಂದು ಮಾಸಂಗಳ ಮನಂಗೊಂಡು ಜಪವಂ ಮಾಡುವದಯ್ಯ ಶಾಂತವೀರೇಶ್ವರಾ