Index   ವಚನ - 296    Search  
 
ಗುರುವಿಂಗೆ ತನುವನರ್ಪಿಸಿ ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರದಿಂದ ಮನವನರ್ಪಿಸಿ ಚರಲಿಂಗಕ್ಕೆ ಅನ್ನಾಚ್ಛಾದನಾಲಂಕಾರಾಗಳಿಂ ಧನವನರ್ಪಿಸಿ ಇಂತೀ ತ್ರಿವಿಧವು ತ್ರಿವಿಧ ಪ್ರಸಾದಮಾಗಾಳ್ಳಾತನೆ ತ್ರಿವಿಧ ಭಕ್ತನಯ್ಯ ಶಾಂತವೀರೇಶ್ವರಾ ಸೂತ್ರ: ಈ ಪ್ರಕಾರದಿಂದ, ತ್ರಿವಿಧ ಸಂಪತ್ತಿ ಸ್ಥಲದಲ್ಲಿ ಲೋಲುಪ್ತನಾದ ಭಕ್ತನ ಶರೀರದಲ್ಲಿ ಗುರುಭಕ್ತಿ ಮನದಲ್ಲಿ ಲಿಂಗಭಕ್ತಿ, ಜ್ಞಾನದಲ್ಲಿ, ಜಂಗಮಭಕ್ತಿ ಪರಿಣಾಮದಲ್ಲಿ ಪ್ರಸಾದಭಕ್ತಿ ನಿಶ್ಚಿತವಾದ ಭೇದವೆಂತೆನೆ ಮುಂದೆ ಚತುರ್ವಿಧ ಸಾರಾಯಸ್ಥಲವಾದುದು.