ಅದೆಂತೆನೆ, ಪುರತನರು ಸುಖರೂಪವಾದಂಥ
ನೋಡಲ್ತಕ್ಕ ವ್ಯಾಘ್ರದೃಷ್ಟಿ ಕುರಂಗದೃಷ್ಟಿ ಮಾರ್ಜಾಲದೃಷ್ಟಿ
ಊರ್ಧ್ವದೃಷ್ಟಿ ಅಧೋದೃಷ್ಟಿ ಸಂಚಲ್ಯ ದೃಷ್ಟಿಗಳಿಂದೆ
ಅರೆವಿರಿದರವಿಂದದೋಪಾದಿಯಲ್ಲಿ
ಇಷ್ಟಲಿಂಗದ[ಲಿ] ಅನಿಮಿಷ ದೃಷ್ಠಿಯುಳ್ಳವರಾಗಿ ನಡೆವುತ್ತಿಹರು.
ಆ ಪುರಾತನರೋಪಾದಿಯಲ್ಲಿ
ಗುರು ಲಿಂಗ ಜಂಗಮ ಪ್ರಸಾದವೆಂಬ
ನಾಲ್ಕರಿಂದವೆ ಆ ವಸ್ತುವನು ಧ್ಯಾನಿಸಬೇಕು.
ವೇದಂಗಳು ವೇದ ಸ್ವರೂಪವಾದ ಗುರು ಲಿಂಗ ಜಂಗಮ
ಪ್ರಸಾದವೆಂಬ ನಾಲ್ಕರಿಂದವೆ ಆ ಭಕ್ತರುಗಳನು
ಸುಖರೂಪವಾದ ಸ್ಮರಣ, ಪ್ರೇರಣ,
ಈಳನ, ಯಜನವೆಂಬೀ ನಾಲ್ಕು ಭಕ್ತಿಯಿಂ ಜ್ಞಾನವನೆಯ್ದಿಸುವುದಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Adentene, puratanaru sukharūpavādantha
nōḍaltakka vyāghradr̥ṣṭi kuraṅgadr̥ṣṭi mārjāladr̥ṣṭi
ūrdhvadr̥ṣṭi adhōdr̥ṣṭi san̄calya dr̥ṣṭigaḷinde
areviridaravindadōpādiyalli
iṣṭaliṅgada[li] animiṣa dr̥ṣṭhiyuḷḷavarāgi naḍevuttiharu.
Ā purātanarōpādiyalli
guru liṅga jaṅgama prasādavemba
nālkarindave ā vastuvanu dhyānisabēku.
Vēdaṅgaḷu vēda svarūpavāda guru liṅga jaṅgama
prasādavemba nālkarindave ā bhaktarugaḷanu
sukharūpavāda smaraṇa, prēraṇa,
īḷana, yajanavembī nālku bhaktiyiṁ jñānavaneydisuvudayya
śāntavīrēśvarā