Index   ವಚನ - 299    Search  
 
ದೀಕ್ಷಾತ್ರಯದಿಂದೆ ಆಣವ ಮಾಯಾ ಕಾರ್ಮಿಕವೆಂಬ ಮಲತ್ರಯ ಸಂಬಂಧವಾದ ಅಜ್ಞಾನವ ನಷ್ಟವ ಮಾಡುವುದಕ್ಕೆ ‘ಗುರು’ವಾದನಯ್ಯ ಶಿವನು. ಮನದ ಸಂಕಲ್ಪ ವಿಕಲ್ವವ ಕೆಡಿಸಲು ‘ಲಿಂಗ’ವಾದನಯ್ಯ ತನುತ್ರಯಂಗಳ ವರ್ತನೆಯ ನಷ್ಟವ ಮಾಡುವುದಕ್ಕೆ ‘ಪ್ರಸಾದ’ವಾದನಯ್ಯ ಸಮ್ಯ[ಕ್]ಜ್ಞಾನದಿಂದ ಮುಖ್ಯವಾದ ‘ಜಂಗಮ’ವಾದನಯ್ಯ ಶಾಂತವೀರೇಶ್ವರಾ