Index   ವಚನ - 323    Search  
 
ಜೀವನೆ ಕ್ಷೇತ್ರವು, ಭಕ್ತಿಯೆ ಬೀಜವು, ಮಹೇಶ್ವರನೆ ಬೀಜ ಉಳ್ಳಾತನಯ್ಯ; ಅದು ಕಾರಣ ಕ್ಷೇತ್ರಕ್ಕೆಯು, ಬೀಜಕ್ಕೆಯು, ಬೀಜ ಉಳ್ಳಾತಂಗೆಯೂ ವಿಯೋಗವಿಲ್ಲ. ಅವಾಗಳೂ ಸಂಯೋಗ ಉಂಟಯ್ಯ ಶಾಂತವೀರೇಶ್ವರಾ ಸೂತ್ರ: ಈ ಪ್ರಕಾರದಿಂ ನಿರುಪಾಧಿಕರಾಗಿರ್ಪ ಕತೃ ಭೃತ್ಯ ಭಾವದಿಂದ ಸೇವಪರನಾದ ಮಹಾತ್ಮನು ತಾನು ಮಾಡುವ ಭಕ್ತಿಯಲ್ಲಿಯೂ ಆ ಭಕ್ತಿಯ ಮಾಡಿಸಿಕೊಂಬ ವ್ಯಕ್ತಿಯಲ್ಲಿಯೂ ಅಭೇದ ಪ್ರಾಪ್ತವಾಗುತ್ತ ಇರಲಾಗಿ ಮುಂದೆ ‘ಸಹಜ ಮಾಟಸ್ಥಲ’ವಾಯಿತ್ತು.