Index   ವಚನ - 339    Search  
 
ವಚನ: ಗುರುದೇವ ಉಂಟೆಂಬ ಬುದ್ಧಿಯು ಕಟ್ಟಿನ ಕೃತ್ಯ ಸತ್ಯವು; ಆ ಸದಾಚಾರವು ಶುಚಿತ್ವವು ಮೊದಲಾದ ಲಕ್ಷಣಗಳಿಂದ ವ್ಯಕ್ತವಾದ ಸದ್ವರ್ತನೆ ಉಳ್ಳಾತನಾಗಿ ಶಿವಲಿಂಗ ಒಂದರಲ್ಲಿಯೆ ನಿಷ್ಠೆಯುಳ್ಳಾತನಹ ವೀರಮಾಹೇಶ್ವರಾಚಾರದೊಡನೆ ಕೂಡಿದಾತನು ಮಾಹೇಶ್ವರ ಸಂಬಂಧಿಯಾದ ಕಾರಣ ಮಾಹೇಶ್ವರಸ್ಥಲವೆಂದು ಬಲ್ಲವರು ಹೇಳುವರಯ್ಯ ಶಾಂತವೀರೇಶ್ವರಾ