Index   ವಚನ - 338    Search  
 
ಆ ಷಟ್ಸ್ಥಲ ಜ್ಞಾನಿಯು ಸಂಸಾರವ ಗೆಲ್ಲವದರಿಂದೆ ವಂದ್ಯನು; ಪೂಜ್ಯನು, ಆತನು ಅತ್ಯುಗ್ರವಾದ ಕಡೆಯಿಲ್ಲದ ದಾಂಟಲಾಗದ ಸಂಸಾರ ಸಮುದ್ರವನು ದಾಂಟಿ ಪರಮಾತ್ಮನಾದ ಎನ್ನನು ಎಯ್ದಿ ಮರಳಿ ಭವಕ್ಕೆ ಬಾರನು. ಅದು ಕಾರಣದಿಂದ ಮಾಹೇಶ್ವರನ ಈ ನಿಷ್ಠೆಯು ಎನ್ನಿಂದ ನುಡಿಯಲು ಶಕ್ತವಾಯಿತು ಎಲೆ ಕುಮಾರನೆ ಬ್ರಹ್ಮ ಮೊದಲಾದ ಮಿಕ್ಕಿನ ದೇವತೆಗಳ ಬಗೆಗೆ ಹೇಳುವದೇನಿದೆ, ಹಲವು ಮಾತಿನಿಂದೇನು ಪ್ರಯೋಜನ? ಆತನೆ ನಾನು ಸಂದೇಹವಿಲ್ಲ ಶಾಂತವೀರೇಶ್ವರಾ ಮಾಹೇಶ್ವರಸ್ಥಲ ಸಂಪೂರ್ಣಂ ಮಂಗಳಂ ಮಹಾ ಶ್ರೀ ಶ್ರೀ ಶ್ರೀ ಲಿಂಗನಿಷ್ಠಾಸ್ಥಲ ಸೂತ್ರ: ಈ ಪ್ರಕಾರದಿಂದ ಮಾಹೇಶ್ವರಸ್ಥಲದಲ್ಲಿ ನಿಯಮ ವ್ರತಾದಿಗಳಂ ಮಾಡುತ್ತ ನಿಶ್ಚಯವುಳ್ಳ ಮಾಹೇಶ್ವರನ ಅಂಗದಲ್ಲಿರ್ದ ಲಿಂಗನಿಷ್ಠಾ ಭೇದವೆಂತೆನೆ ಮಂದೆ ಲಿಂಗನಿಷ್ಠಾಸ್ಥಲವಾಯಿತ್ತು.