Index   ವಚನ - 383    Search  
 
ಬಳಿಕ ಪೃಥುವ್ಯಾದಷ್ಟ ಮೂರ್ತಿಗಳಿಗೆ ಶಿವನೆ ಚೈತನ್ಯನೆಂತೆಂದೊಡೆ ಪೃಥ್ವಿ ಮೊದಲಾಗಿ ಕಡೆಯಾದ ಶಿವನ ದೇಹವಾಗಿರ್ದ ಜಗತ್ಪ್ರಪಂಚು ಎಂಟು ಪ್ರಕಾರದಿಂದ ಇರುವುದಯ್ಯ. ಅಷ್ಟತನುಗಳಿಗೆ ಚೈತನ್ಯರೂಪವಾದ ಈ ಪರಮೇಶ್ವರನು ನಿಗಮಾಗಮೋಕ್ತವಾದ ಸಮಸ್ತ ತತ್ವವನು ನಿಯಮಿಸುವನಯ್ಯ ಶಾಂತವೀರೇಶ್ವರಾ