ಪರಮೇಶ್ವರನಿಗೆ ಪೃಥ್ವಿ ಮೊದಲಾದಷ್ಟಮೂರ್ತಿಯುಳ್ಳ ತನುವು.
ಆ ಪೃಥುವ್ಯಾದ್ಯಷ್ಟಮೂರ್ತಿಗಳಿಗೆ ಅಧಿಷ್ಠಾಪ್ಯವಹತನದಿಂದ
ಪ್ರತ್ಯಕ್ಷವಾದ ಐಕ್ಯವು ಪೃಥ್ವಿ ಮೊದಲಾದ ಈ ಸಮಸ್ತವು
ಕಾರಣತ್ರಯದಿಂದ ಹುಟ್ಟಿದ ಕಾರ್ಯವು
ನಿಮಿತ್ತ ಕಾರಣನಾದ ಪರಮೇಶ್ವರನು,
ನಿಮಿತ್ತ ಕಾರಣವಾದ ಕುಂಬಾರನು
ಹೇಂಗೆ ಉಪಾದನ ಕಾರಣವಾದ ಮಣ್ಣ ಮುದ್ದೆಯಲಿಲ್ಲ ಹಾಂಗೆ
ಪ್ರತ್ಯಕ್ಷವಾದ ಈ ಪರಮೇಶ್ವರನು
ಈ ಕಾರ್ಯ ರೂಪವಾದ ಜಗತ್ತಲ್ಲವಯ್ಯ
ಶಾಂತವೀರೇಶ್ವರಾ