Index   ವಚನ - 394    Search  
 
ಜಗದೊಳಗೆ ಶಿವ ಪರಿಪೂರ್ಣನಯ್ಯ. ಶಿವನಲ್ಲದೆ ಜಗಕ್ಕಾಧಾರವಿಲ್ಲ. ಶಿವನು ಜಗದ ಅಂರರ್ಯಮಿಯಯ್ಯ. ‘ವಿಶ್ವತೋಚಕ್ಷು ವಿಶ್ವತೋಮುಖ’ನಯ್ಯ ಜಲದೊಳಗಣ ಸೂರ್ಯಬಿಂಬದಂತೆ, ಶಿವನು ಲೋಕಂಗಳೊಳಗಿರ್ದಡೇನು, ಆ ಜಗತ್ತಿನ ಪುಣ್ಯ ಪಾಪಕ್ಕೊಳಗಲ್ಲವಯ್ಯ ಶಾಂತವೀರೇಶ್ವರಾ