ಬಿಲ್ವಾದಿ ಪತ್ರೆಯು ಕುಮುದಾದಿ ಕುಸುಮವು
ನಾರಿಕೇಳಾದಿ ಫಲವು, ಪನ್ನಿರು ಎಳೆನೀರು ಹಾಲು ಮಜ್ಜಿಗೆ
ಪಾನಕ ಮೊದಲಾದ ಪಾನೀಯ ದ್ರವ್ಯವು,
ಗಂಧ ಕಸ್ತೂರಿ ಕಮ್ಮೆಣ್ಣೆ ಪುಣಗು ಜವಾದಿ
ಮೊದಲಾದ ಸುಗಂಧವ,
ನೀಲ ಪೀತ ಶ್ವೇತ ರಕ್ತ ಹರೀತ ಕಪೋತ
ಕೃಷ್ಣ ಮಾಂಜಿಷ್ಠ ಮೊದಲಾದ ರೂಪು,
ಸುಣ್ಣ ಬಣ್ಣ ಮೊದಲಾದ ಸ್ಪರ್ಶನವು,
ತಾಳ ಕೌಸಳವಿಡಿದು ಹುಟ್ಟಿದ ಶಬ್ದ,
ತಂತಿವಿಡಿದು ಹುಟ್ಟಿದ ಶಬ್ದ, ಕುರುಹುವಿಡಿದು ಹುಟ್ಟಿದ ಶಬ್ದ,
ನಾಗಸರ ಕೊಳಲು ಮೊದಲಾದವರಿಂದ ಹುಟ್ಟಿದ ಶಬ್ದ,
ವಚನಗೀತ ಮೊದಲಾದ ಶಬ್ದವು.
ರತಿಕ್ರೀಡೆ ಸಹವಾಗಿ ಲಿಂಗಾರ್ಪಣವಲ್ಲದೆ
ಉಳಿದುದೇನು ಇಲ್ಲವೆಂದು ವೇದ
ಅನುಸೂತ್ರಂಗಳ್ಪೇಳುತ್ತಿರ್ದಪವಯ್ಯ
ಶಾಂತವೀರೇಶ್ವರಾ