ಶಿವಲಿಂಗದಲ್ಲಿ ತತ್ಪರರಾದ ಪ್ರಸಾದಿಗಳಿಂದ
ಶಿವಲಿಂಗದ ಭವರೋಗ ವೈದ್ಯವಾದ
ಬ್ರಹ್ಮವಿಷ್ಣು ಮೊದಲಾದ ದೇವತೆಗಳಿಂದ
ವಶಿಷ್ಠ ಮೊದಲಾದ ತಪಸ್ವಿಗಳಿಂದ
ಪ್ರೀತಿಗೆ ಪಾತ್ರವಾದ ಅನ್ನ ಮೊದಲಾದ ಪ್ರಸಾದವು
ಇಹಪರ ಭೋಗಮೋಕ್ಷಂಗಳಿಗೊಸ್ಕರ ಹಾಂಗೆ
ಸ್ವೀಕರಿಸಲು ಯೋಗ್ಯವು, ಹಾಂಗೆಯೆ
ಗುರುಪ್ರಸಾದವು ಶಿವ ಜಂಗಮ ಪ್ರಸಾದಾನ್ನವು
ಸ್ವೀಕರಿಸಲು ಯೋಗ್ಯವಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Śivaliṅgadalli tatpararāda prasādigaḷinda
śivaliṅgada bhavarōga vaidyavāda
brahmaviṣṇu modalāda dēvategaḷinda
vaśiṣṭha modalāda tapasvigaḷinda
prītige pātravāda anna modalāda prasādavu
ihapara bhōgamōkṣaṅgaḷigoskara hāṅge
svīkarisalu yōgyavu, hāṅgeye
guruprasādavu śiva jaṅgama prasādānnavu
svīkarisalu yōgyavayya
śāntavīrēśvarā