ಎಲೆ ಪಾರ್ವತಿದೇವಿ, ಅಖಂಡ ಲಿಂಗದಲ್ಲಿ
ಶುದ್ಧಶೈವರು ಹೊತ್ತುಕೊಂಡು ತಿರುಗುವ ಲಿಂಗದಲ್ಲಿ,
ಸ್ವಯಂಭು ಲಿಂಗದಲ್ಲಿ ಸಮಸ್ತವಾದ
ವೀರಭದ್ರ ಬಸವೇಶ್ವರ ವಿಘ್ನೇಶ್ವರ
ಮೊದಲಾದ ಪ್ರತಿಮೆಗಳಲ್ಲಿ ಚಂಡೇಶ್ವರನು ಅಧಿಕಾರಯು ಆಗನು.
ಸಮಸ್ತವಾದ ದೇವತೆಗಳು ರಾಕ್ಷಸರು ಮನುಷ್ಯರಿಂದ
ಶಾಸ್ತ್ರ ವಿಧಾನದಿಂದ ಪ್ರತಿಷ್ಠಿಸಿದಂತ ಲಿಂಗದಲ್ಲಿ
ಈ ಮೂರು ನಿರ್ಮಾಲ್ಯ ಪ್ರಸಾದವನು ಕೂರ್ತ
ಚಂಡೇಶ್ವರನು ಅಧಿಕಾರಿ ಎಂದು ದೇವಿಯರಿಗೆ
ಈಶ್ವರನು ನಿರೂಪಿಸಿದನು
ಶಾಂತವೀರೇಶ್ವರಾ