Index   ವಚನ - 492    Search  
 
ಬಳಿಕಾ ಪ್ರಾಣಲಿಂಗಾಶ್ರಯವಾದ ಹೃದಯಕಮಲವೆಂತಿರ್ಪುದೆಂದೊಡೆ: ಪ್ರಾಣವಾಯುವಿನಿಂದ ವ್ಯಾಪಿಸಿರುವ ಪರಮ ಸೂಕ್ಷ್ಮವಾದ ಚಿದಾಕಾಶದಿಂದ ಒಪ್ಪುತ್ತಿರುವ ಬ್ರಹ್ಮರಂಧ್ರದಲ್ಲಿಯ ಪೂರ್ವ ಚಂದ್ರನಿಂದ ಒಸರುತ್ತಿರ್ದ ಅಮೃತ ಸೇಚನೆಯಿಂದ ಅತ್ಯಂತ ಶೈತ್ಯವಾಗಿರ್ದ ನವ ವಾಯುಗಳಿಂದ ಕಚ್ಚಲ್ಪಟ್ಟ ಜಡ ಇಂದ್ರಿಯಗಳೆಂಬ ಒಂಬತ್ತು ಬಾಗಿಲು ಉಳ್ಳ ಶಿವ್ಜಜ್ಞಾನವೆಂಬ ದೀಪವುಳ್ಳ ಊರ್ಧ್ವ ಹೃದಯವೆಂಬ ಮನೆಯಲ್ಲಿ ಅಷ್ಟದಳ ಕಮಲಕರ್ಣಿಯಲ್ಲಿರುತ್ತಿರ್ದ ಪರಮ ಶಿವನಿಗ ದೇಹವಾಗಿರ್ದ ಚಿದ್ರೂಪವಾದ ಪ್ರಾಣಲಿಂಗವನು ಗೂರೂಪದೇಶದಿಂದೆ ಸಾಕ್ಷತ್ಕರಿಸಿ ಧ್ಯಾನಿಸಿ ಭಾವ ದ್ರವ್ಯಗಳಿಂದವೆ ಸದಾಕಾಲವು ಪೂಜಿಸುವುದಯ್ಯ ಶಾಂತವೀರೇಶ್ವರಾ