Index   ವಚನ - 516    Search  
 
ಕುಂಡಲಿ ಎಂಬ ಹೆಸರುಳ್ಳ ಅಧಿಕವಾದ ನಾಡಿಯು ನಾಭಿ ಸ್ಥಾನದಲ್ಲಿರುತ್ತಿಹುದು. ಆ ನಾಡಿಯ ಮಧ್ಯದಲಿ ಕುಂಡಲಿ ಎಂಬ ಶಕ್ತಿಯು ಸುತ್ತಿದ ಸರ್ಪದ ಹಾಂಗೆ ಎಂಟು ಸುತ್ತುಗಳೊಡನೆ ಕೂಡಿ ನಿದ್ರೆಗೈಯ್ವುತ್ತಿರ್ದ ಸರ್ಪನ ಹಾಗೆ ಉಸುರ ಬಿಡುವ ಆವಾಗಳೂ ಎಚ್ಚತ್ತಿರ್ದ, ಕಾಂತಿಯಿಂದ ದೀಪಸುತ್ತಿರ್ದ, ಕುಂಡಲಿ ಎಂಬ ಶಕ್ತಿಯು ನಾಭಿಯಲ್ಲಿ ಆವಾಗಲೂ ಇರುತ್ತಿಹುದಯ್ಯ ಶಾಂತವೀರೇಶ್ವರಾ