Index   ವಚನ - 548    Search  
 
ಆಕಾರಾಂಗನಾದ ಶರಣನಲ್ಲಿ ಐಕ್ಯ ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಎಂಬ ಪಂಚಾಂಗವು ಅಡಗಿ ಆ ಶರಣಂಗೆ ಪ್ರಸಾದಲಿಂಗವೆ ಸಂಬಂಧವಾಗಿ ಪ್ರಸಾದಲಿಂಗದಲ್ಲಿಯೆ ಮಹಾಲಿಂಗ ಆಚಾರಲಿಂಗವು ಗುರುಲಿಂಗ ಶಿವಲಿಂಗ ಜಂಗಮಲಿಂಗವೆನಿಸಿದ ಪಂಚಲಿಂಗವು ಲೀನವಾಗಿ ಆ ಪ್ರಸಾದಲಿಂಗವೇ ಆಲಯವಾಗಿ ಇಂತೀ ಷಡ್ವಿಧ ಲಿಂಗದಲ್ಲಿ ಯೋಗವಾಗಿ ಅಭಿನ್ನವಾಗಿಪ್ಪಾತನೆ ಶರಣನಯ್ಯ ಶಾಂತವೀರೇಶ್ವರಾ