Index   ವಚನ - 547    Search  
 
ಎನ್ನ ದೇಹೇಂದ್ರಿಯಂಗಳು ಮೊದಲಾದ ರೂಪವು ಜ್ಞಾನ ಪ್ರಕಾಶದ ಸತ್ವದಿಂದ ಶಿವಲಿಂಗವು ತಾನೆ; ಸಂದೇಹವಿಲ್ಲ! ಹೋಗೆಂಬ ಜ್ಞಾನದಿಂದ ಕೂಡಿದ ಶಬ್ದ ಸ್ಪರ್ಶ ರೂಪ ರಸ ಗಂಧಂಗಳೆಂಬ ವಿಷಯವಾಸನೆ ಇಲ್ಲದಿರಲು ವಿಶುದ್ಧಾತ್ಮ ವಸ್ತುವಾಗಿಹುದು. ಆ ವಸ್ತುವನೆ ಶಿವಾಗಮ ಜ್ಞಾನಿಗಳು ‘ಶರಣ ಸ್ಥಲ’ವೆಂದು ಹೇಳುವರಯ್ಯ ಶಾಂತವೀರೇಶ್ವರಾ