ಧರ್ಮಾಧರ್ಮ ಕರ್ಮಂಗಳಿಗೆ
ಕರ್ತೃವಾನೆಂಬ ಅಭಿಮಾನಿಸುವುದೀಗ ಕರ್ಮಕಾಂಡ,
ಅಧರ್ಮಾಧರ್ಮ ಕರ್ಮಂಗಳಿಗೆ ಕರ್ತೃ ನಾನಲ್ಲ,
ಆ ಕೃತ್ಯತ್ವಕ್ಕೆ ಶಿವನೆ ಸಾಕ್ಷಿಕನೈಸೆ ಎಂದು
ಅಭಿಮಾನಿಸುವುದೀಗ ಜ್ಞಾನಕೊಂಡ.
ಆ ಧರ್ಮಾಧರ್ಮಗಳಿಗೆ ಕರ್ತೃವು ನಾನಲ್ಲ!
ಸಾಕ್ಷಿಯೂ ನಾನಲ್ಲ. ಅದಕ್ಕೆ ಶಿವನೆ ಕರ್ತೃ ಶಿವನೆ ಸಾಕ್ಷಿಕನೆಂದು
ಆ ಉಭಯಾಭಿಮಾನ ರಹಿತವಾಗಿ ಇಹಂಥಾದುದೆ
ಭಕ್ತಿಕಾಂಡವೆಂದು ಶಿವಾಚಾರ್ಯರು ನಿರೂಪಿಸಿರುವರಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Dharmādharma karmaṅgaḷige
kartr̥vānemba abhimānisuvudīga karmakāṇḍa,
adharmādharma karmaṅgaḷige kartr̥ nānalla,
ā kr̥tyatvakke śivane sākṣikanaise endu
abhimānisuvudīga jñānakoṇḍa.
Ā dharmādharmagaḷige kartr̥vu nānalla!
Sākṣiyū nānalla. Adakke śivane kartr̥ śivane sākṣikanendu
ā ubhayābhimāna rahitavāgi ihanthādude
bhaktikāṇḍavendu śivācāryaru nirūpisiruvarayya
śāntavīrēśvarā