Index   ವಚನ - 578    Search  
 
ಪುಷ್ಪ ಫಲೋತ್ಪತ್ತಿಯನುಂಟು ಮಾಡುವುದು. ಫಲವು ತನಗೆ ಕಾರಣವಾದ ಪುಷ್ಪ ವಿನಾಶಮಂ ಮಾಳ್ಪುದು. ಸತ್ಕರ್ಮವು ಜ್ಞಾನ ಪ್ರಕಾಶವನುಳ್ಳುದು. ಅಜ್ಞಾನವು ಕರ್ಮನಾಶವನುಳ್ಳುದು. ಆವನೋರ್ವ ಶರಣನು ತನ್ನ ಬುದ್ಧಿಯಿಂದ ಶಿವನೆಂಬಾತಂಗೆ ಶರೀರದಲ್ಲಿ ಮಾಡತಕ್ಕ ಕರ್ಮದಿಂದೇನು ಪ್ರಯೋಜನವು? ಶಿವಜ್ಞಾನ ಒಂದರಲ್ಲಿಯೇ ನಿಷ್ಠೆಯುಳ್ಳಾತಂಗೆ ಅಹಂಕಾರದಿಂದ ಹುಟ್ಟಿದಂತಹ ಭ್ರಮೆಯಿಂದೇನು ಪ್ರಯೋಜನವಯ್ಯ? ಅಹಂವೆಂಬುದುಂಟಾದರೆ ತ್ವಂ ಎಂಬುದುಂಟು! ಅಹಂ ತ್ವಂ ಎಂಬ ಉಭಯವನಳಿಯಲು ಲಿಂಗೈಕ್ಯವಯ್ಯ. ಕ್ರಿಯಾ ವಿಶ್ರಾಂತಿಯೇ ಸಮ್ಯಜ್ಞಾನ. ಸಮ್ಯಜ್ಞಾನವೆಂಬುದು ಶಿವನೆ ನಾನೆಂಬರಿವೆಂದು ಶಿವತತ್ತ್ವಜ್ಞಾನಿಗಳು ಹೇಳುವುರು. ಜ್ಞಾನದಿಂದ ಮೋಕ್ಷವಾಗುವುದಯ್ಯ ಶಾಂತವೀರೇಶ್ವರಾ