Index   ವಚನ - 589    Search  
 
ಶಿವಲಿಂಗದಲ್ಲಿಯ ಏಕಭಾವದಿಂದಾದ ಶಿವತತ್ತ್ವವನುಳ್ಳ ಶಿವಲಿಂಗೈಕ್ಯನು ಜೀವನ್ಮುಕ್ತನಾಗಿ ದೇಹವುಳ್ಳವನಾದರೂ ಜಾತಿ ಜನ್ಮ ರಜೋಚ್ಛಿಷ್ಟ ಪ್ರೇತಾದಿ ಪಂಚಸೂತಕಗಳಿಂದ ಸ್ವೇಚ್ಛಾರಗಳ ಲೇಪನವಿಲ್ಲದಿರುವವನು. ಲಿಂಗೈಕ್ಯದಲ್ಲಿ ಮನಸ್ಸುಳ್ಳವರಿಗೆ ಶಿವಾದ್ವೈತ ಜ್ಞಾನವು ಸ್ಥಿರವಾಗಲು ದುಃಕರ್ಮ ಸತ್ಕರ್ಮ ಆ ದ್ವಂದ್ವ ಕರ್ಮಂಗಳು ಹಾನಿವೃದ್ಧಿಗಳೇನು ಇಲ್ಲವಯ್ಯ ಶಾಂತವೀರೇಶ್ವರಾ