Index   ವಚನ - 590    Search  
 
ಭಕ್ತಂಗೆ ಪೃಥ್ವಿಯೇ ಅಂಗ, ಆ ಅಂಗಕ್ಕೆ ಸುಚಿತ್ತವೆಂಬ ಹಸ್ತ; ಆ ಹಸ್ತಕ್ಕೆ ಕರ್ಮ ಸಾದಾಖ್ಯ, ಆ ಸಾದಾಖ್ಯ್ಕಕೆ ಕ್ತಿಯಾಶಕ್ತಿ; ಆ ಶಕ್ತಿಗೆ ಆಚಾರಲಿಂಗ, ಆ ಆಚಾರಲಿಂಗಕ್ಕೆ ನಿವೃತ್ತಿ ಕಲೆ; ಆ ಕಲೆಗೆ ಘ್ರಾಣೇಂದ್ರಿಯವೆ ಮುಖ, ಆ ಮುಖಕ್ಕೆ ಸುಗಂಧ ಪದಾರ್ಥ. ಆ ಪದಾರ್ಥವನು ರೂಪು ರುಚಿ ತೃಪ್ತಿಯನರಿದು ‘ನ’ ಕಾರಮಂತ್ರಯುಕ್ತವಾಗಿ ಶ್ರದ್ಧಾ ಭಕ್ತಿಯಿಂದರ್ಪಿಸಿ ಆ ಸುಗಂಧ ಪ್ರಸಾದವನು ಭೋಗಿಸಿ ಸುಖಿತ್ತಿಹನಯ್ಯ ಭಕ್ತನು ಶಾಂತವೀರೇಶ್ವರಾ