ಶರಣಂಗೆ ಆಕಾಶವೆ ಅಂಗ, ಆ ಅಂಗಕ್ಕೆ ಸುಜ್ಞಾನವೆಂಬ ಹಸ್ತ.
ಆ ಹಸ್ತಕ್ಕೆ ಶಿವಸಾದಾಖ್ಯ, ಆ ಸಾದಾಖ್ಯಕ್ಕೆ ಪರಾಶಕ್ತಿ.
ಆ ಶಕ್ತಿಗೆ ಪ್ರಸಾದಲಿಂಗ. ಆ ಲಿಂಗಕ್ಕೆ ಶಾಂತ್ಯಾತೀತ ಕಲೆ.
ಆ ಕಲೆಗೆ ಶ್ರೋತ್ರೇಂದ್ರಿಯವೆ ಮುಖ.
ಆ ಮುಖಕ್ಕೆ ಸುಶಬ್ದ ದ್ರವ್ಯ ಪದಾರ್ಥ.
ಆ ಪದಾರ್ಥವನು ರೂಪು ರುಚಿ ತೃಪ್ತಿಯನರಿದು
‘ಯ’ಕಾರ ಮಂತ್ರಯುಕ್ತವಾಗಿ ಆನಂದ
ಭಕ್ತಿಯಿಂದರ್ಪಿಸಿ ಸುಖಿಸುತ್ತಿಹನಯ್ಯ ಶರಣನು
ಶಾಂತವೀರೇಶ್ವರಾ