ಐಕ್ಯಂಗೆ ಆತ್ಮನೆ ಅಂಗ
ಆ ಅಂಗಕ್ಕೆ ಸದ್ಭಾವವೆಂಬ ಹಸ್ತ.
ಆ ಹಸ್ತಕ್ಕೆ ಮಹಾಸಾದಾಖ್ಯ.
ಆ ಸಾದಾಖ್ಯಕ್ಕೆ ಚಿಚ್ಛಕ್ತಿ.
ಆ ಶಕ್ತಿಗೆ ಮಹಾಲಿಂಗ;
ಆ ಶಕ್ತಿಗೆ ಶಾಂತ್ಯಾತೀತೋತ್ತರ ಕಲೆ.
ಆ ಕಲೆಗೆ ಹೃದಿಂದ್ರಯವೆ ಮುಖ.
ಆ ಮುಖಕ್ಕೆ ಸುತೃಪ್ತಿ ದ್ರವ್ಯ ಪದಾರ್ಥ.
ಆ ಪದಾರ್ಥವನು ರೂಪು ರುಚಿ ತೃಪ್ತಿಯನರಿದು
‘ಓಂ’ಕಾರ ಮಂತ್ರಯುಕ್ತವಾಗಿ ಸಮರಸ ಭಕ್ತಿಯಿಂದರ್ಪಿಸಿ
ಆ ಸುತೃಪ್ತಿ ಪ್ರಸಾದವಂ ಭೋಗಿಸುತ್ತಿಹನಯ್ಯ ಐಕ್ಯನು
ಶಾಂತವೀರೇಶ್ವರಾ