ಮತ್ತಂ, ದೀಕ್ಷೆಯಿಂ ಸಮಸ್ತ ಪಾಶಂಗಳು ತೊಲಗಿ
ಶರೀರ ಎಂತು ಸಂಭವಿಪುದೆಂಬ ಚೋದ್ಯಮಂ
ದೃಷ್ಟಾಂತ ಪೂರ್ವಾಕವಾಗಿ ಪರಿಹರಿಸುತ್ತಿದ್ದಾನು.
ಘಟ ನಿಷ್ಪತ್ತಿಯಾದರೂ ಮತ್ತೂ ಭ್ರಮಸುತ್ತರ್ದ ಕುಲಾಲಚಕ್ರವೆಂತೆಂತೆ
ದೀಕ್ಷಾಯಾದರೂ ದೀಕ್ಷೋತ್ತರ ಕ್ರಿಯಾವಸಾನ ಪರ್ಯಂತರವಾಗಿ
ಪ್ರಾರಬ್ಧ ಕರ್ಮ ವಾಸನೆಯಿಂದ ಶರೀರ ಶಾಂತಿ ಸಂಭವಿಪುದು.
ಮತ್ತಂ, ಘಟದೊಳರ್ಗಿದ ದೀಪವು ಘಟ ಒಡೆಯಲಾಗಿ
ಆ ದೀಪವು ಎಲ್ಲ ಕಡೆಯಲ್ಲಿಯ ಎಂತು ಪ್ರಕಾಶಿಸುವುದೊ
ಅಂತೆ ದೀಕ್ಷತನು ದೇಹಾವಸಾನದಲ್ಲಿ ಪರಮ ಮುಕ್ತನಪ್ಪನಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Mattaṁ, dīkṣeyiṁ samasta pāśaṅgaḷu tolagi
śarīra entu sambhavipudemba cōdyamaṁ
dr̥ṣṭānta pūrvākavāgi pariharisuttiddānu.
Ghaṭa niṣpattiyādarū mattū bhramasuttarda kulālacakraventente
dīkṣāyādarū dīkṣōttara kriyāvasāna paryantaravāgi
prārabdha karma vāsaneyinda śarīra śānti sambhavipudu.
Mattaṁ, ghaṭadoḷargida dīpavu ghaṭa oḍeyalāgi
ā dīpavu ella kaḍeyalliya entu prakāśisuvudo
ante dīkṣatanu dēhāvasānadalli parama muktanappanayya
śāntavīrēśvarā
]