ಮತ್ತಮಾ ಸ್ವಾಯತದೀಕ್ಷೆಯು
ಮೇಧಾದೀಕ್ಷೆ ಮಂತ್ರದೀಕ್ಷೆ ಕ್ರಿಯಾದೀಕ್ಷೆ
ಎಂದು ಮೂರು ಪ್ರಕಾರಮಪ್ಪುದು. ಅವಾವೆಂದೊಡೆ:
ಗುರುಶಿಷ್ಯನ ಮಸ್ತಕದಲ್ಲಿ ಆಗಮೋಕ್ತ ವಿಧಾನದಿಂ
ಶಿವಾಸನವನು ಧ್ಯಾನಿಸಿ ಅಲ್ಲಲ್ಲಿ ಆವುದಾನೊಂದು ಶಿವತತ್ತ್ವ
ಸಮಾವೇಶಗೊಳಿಸುವುದು ‘ವೇಧಾದೀಕ್ಷೆ’ ಎನಿಸುವುದು.
ದೇವಾತಾದಿಗಳು ಸಹವಾಗಿ ಮಂತ್ರೋಪದೇಶವನು ಮಾಡುವದು
‘ಮಂತ್ರದೀಕ್ಷೆ’ ಎನಿಸುವುದು.
ದಿವ್ಯೋತ್ರರ ಕ್ರಿಯೆಗೂಡಿ ಪ್ರಾಣಲಿಂಗೋಪದೇಶವನು ಮಾಡುವುದು
‘ಕ್ರಿಯಾದೀಕ್ಷೆ’ ಎನಿಸುವುದು.
ಮತ್ತಮಾ ಗುರು ಶಿಷ್ಯನ ಕರ್ಣದಲ್ಲಿ ಮಂತ್ರೋಪದೇಶವ ಮಾಡುವುದೆ
‘ಮಂತ್ರದೀಕ್ಷೆ’.
ಶಿಷ್ಯನ ಹಸ್ತಕ್ಕೆ ಗುರುವು ಲಿಂಗವ ಕೊಡುವುದೆ ‘ಕ್ರಿಯಾದೀಕ್ಷೆ’
ಗುರು ತನ್ನ ಹಸ್ತವ ಶಿಷ್ಯನ ಮಸ್ತಕದಲ್ಲಿಡುವುದೆ
‘ವೇಧಾದೀಕ್ಷೆ’ ಎನಿಸುವುದಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Mattamā svāyatadīkṣeyu
mēdhādīkṣe mantradīkṣe kriyādīkṣe
endu mūru prakāramappudu. Avāvendoḍe:
Guruśiṣyana mastakadalli āgamōkta vidhānadiṁ
śivāsanavanu dhyānisi allalli āvudānondu śivatattva
samāvēśagoḷisuvudu ‘vēdhādīkṣe’ enisuvudu.
Dēvātādigaḷu sahavāgi mantrōpadēśavanu māḍuvadu
‘mantradīkṣe’ enisuvudu.Divyōtrara kriyegūḍi prāṇaliṅgōpadēśavanu māḍuvudu
‘kriyādīkṣe’ enisuvudu.
Mattamā guru śiṣyana karṇadalli mantrōpadēśava māḍuvude
‘mantradīkṣe’.
Śiṣyana hastakke guruvu liṅgava koḍuvude ‘kriyādīkṣe’
guru tanna hastava śiṣyana mastakadalliḍuvude
‘vēdhādīkṣe’ enisuvudayya
śāntavīrēśvarā