Index   ವಚನ - 682    Search  
 
ಕಾಮಾದಿ ಅರಿಷಡ್ವರ್ಗ ಚಿತ್ತಾದಿ ಷಟ್ಕರಣ ಅವಿದ್ಯಾದಿ ಪಂಚಕ್ಲೇಶಂಗಳನು ಬಿಟ್ಟು ಭಿಕ್ಷಾಹಾರಿಯಾಗಿ ಸರ್ವರಲ್ಲಿಯೂ ಸಮಾನವಾದ ಬುದ್ಧಿಯುಳ್ಳ ಯತೀಶ್ವರನು ಸ್ವಯಲಿಂಗ ಸಂಜ್ಞೆಯುಳ್ಳ ಯತೀಶ್ವರನು ಪರ ಮುಕ್ತಂಗೆ ಸದೃಶ್ಯವಾದಾತನು ಯಥಾಲಾಭ ಸಂತುಷ್ಟನಾಗಿರ್ದ ಭಸ್ಮೋದ್ಧೂಳನಾದಿಗಳಲ್ಲಿ ನಿಷ್ಠಯುಳ್ಳ ಜತೇಂದ್ರಿಯನಾಗಿರ್ದ ಸ್ವಯಂಲಿಂಗವಾದ ಯೋಗೀಶ್ವರನು ಭಿಕ್ಷುಕನಾಗಿರ್ದರೂ ರಾಜನಾದರೂ ಸಮಾನವಾದ ಬುದ್ಧಿ ವರ್ತನೆ ಉಳ್ಳಾತನಯ್ಯ ಶಾಂತವೀರೇಶ್ವರಾ