Index   ವಚನ - 681    Search  
 
ಆವನಾವನೊಬ್ಬನು ಭಾವವನು ಅರುಹಿಸುವಂಥ ಜ್ಞಾನದ ಲಯ ಉಳ್ಳಾತನಹನು, ಆತನು ಸಮಸ್ತರ ಸಂಗದಿಂದ ಬಿಟ್ಟ ಚಿತ್ತ ಉಳ್ಳಾತನಾಗಿಯು ಕ್ರಿಯೆ ಉಳ್ಳಾತನಾಗಿ ಕಾಣುತ್ತಿಹನು. ಸ್ವಚ್ಛಂದಾಕಾರದಿಂದೆ ಸಂತುಷ್ಟನಾಗಿರ್ದ ಸ್ವಯಂ ಜ್ಯೋತಿರ್ಲಿಂಗದಲ್ಲಿ ತತ್ಪರನಾಗಿ ಪರಮಾತ್ಮ ರೂಪಿಯಾಗಿ ಸಕಳಾಕಾರ ಉಳ್ಳ ಯತಿ ಶ್ರೇಷ್ಠನೆ ‘ಸ್ವಯಂ ಲಿಂಗ’ವೆಂಬ ಹೆಸರುಳ್ಳಾತನಯ್ಯ ಶಾಂತವೀರೇಶ್ವರಾ