Index   ವಚನ - 684    Search  
 
ದೇಹೋಪಾಧಿಗೆ ಧನವ ಗಳಿಸಬೇಕೆಂದು ಲೋಗರ ಗೃಹಕ್ಕೈದಿ ಮನ ಬಂದ ಪರಿಯಲ್ಲಿ ನುಡಿಸಿಕೊಂಡು ಮನನೊಂದು ಬೆಂದು ಮರುಗದೆ ಅನ್ನ ವಸ್ತ್ರ ದಾತರಲ್ಲಿಗೆಯ್ದಿ ದೊರೆತರೆ ಸಂತೋಷಿಯಾಗಿ ದೊರೆಯದಿರ್ದರೆ ಕೋಪಿಸಿದೆ ದೊರೆತುದರಲ್ಲಿ ಪರಿಣಾಮಿಸುವಾತನೆ ಸ್ವಯಜಂಗಮವು ಲಿಂಗಾರ್ಪಿತಕ್ಕೆ ಬಂದುದ ಕೈಕೊಂಡು ಬಾರದುದನಿಚ್ಚೈಸದೆ ಶಿವ ಕೃಪೆಯಿಂದ ಇದ್ದ ಠಾವಿನಲ್ಲಿಯೆ ಇರುವಾತನೆ ಸ್ವಯಜಂಗಮವಯ್ಯ ಶಾಂತವೀರೇಶ್ವರಾ