Index   ವಚನ - 711    Search  
 
ಗುರುಲಿಂಗಮಜಂಗಮ ಭಕ್ತಿ ಎಂಬುದು ಅಲಗಿನ ಮೊನೆ; ತನು ಮನ ಧನದಲ್ಲಿ ವಂಚನೆ ಇಲ್ಲದ ಕಣ್ಣಪ್ಪ ಸಿರಯಾಳ ಸಿಂಧುಬಲ್ಲಾಳ ಮೋಳಿಗೆ ಮಾರಯ್ಯಂಗಲ್ಲದೆ ಸಾಧ್ಯವಾಗದು. ವೀರಶೈವಾಚಾರ ಸಂಪನ್ನರಾದ ಜಗದೇವ ಮಲ್ಲಯ್ಯ ಬೋಮ್ಮಣ್ಣಂಗಲ್ಲದೆ ಅಳವಡದು. ಸೊಡ್ಡಳ ಬಾಚಾಯ್ಯ ಕಿನ್ನರಿ ಬೊಮ್ಮಯ್ಯ ಏಕಾಂತ ರಾಮಯ್ಯಂಗಲ್ಲದೆ ಲಿಂಗನಿಷ್ಠೆಯು ದೊರೆಯದು. ಬಿಬ್ಬ ಬಾಚಯ್ಯಂಗಲ್ಲದೆ ಪ್ರಸಾದ ನಿಷ್ಠೆಯು ಇಲ್ಲ. ಬಸವೇಶ್ವರಂಗಲ್ಲದೆ ಪ್ರಾಣತ್ವವಾಗದು. ತಂಗಟೂರ ಮಾರಯ್ಯಂಗಲ್ಲದೆ ಪ್ರಾಣಲಿಂಗ ತತ್ತ್ವವಿಲ್ಲವಯ್ಯ ಶಾಂತವೀರೇಶ್ವರಾ