ಬಲ್ಲವರು ಮಂತ್ರಗಳಲ್ಲಿ ಕೆಲವು ಮಂತ್ರಗಳನು ಕಂಡರು.
ಆ ಕ್ರಿಯೆಗಳು ತ್ರೇತಾಯುಗದಲ್ಲಿ ಹಲವು
ತೆರನಾಗಿ ಸಂತತವಾಗಿರುವುವು.
ಸತ್ತ್ವ ರೂಪವನು ಬಯಸುವವರು,
ಆ ಕರ್ಮಂಗಳನು ಎಲ್ಲಾ ಕಾಲದಲ್ಲಯೂ ಆಚರಿಸಿ.
ನಿಮಗೆ ಲೋಕದಲ್ಲಿ ಸುಕೃತಕ್ಕೆ ಇದು ಮಾರ್ಗ,
‘ಆರೂ ಕ್ರಿಯ ಚಾರಿತ್ರವೆ ನಿಶ್ಚಯ’ವೆಂದು
ಮುಂಡಕೋಪನಿಷತ್ತು ಪೇಳುತ್ತಂ ಇಹುದು
ಶಾಂತವೀರೇಶ್ವರಾ