ಪರಜಂಗಮಸ್ಥಲಕ್ಕೆ ಶಿರೋಮಣಿಯಾದ
ಪರಿಪೂರ್ಣವಾದಾಚಾರಲಿಂಗ ಸ್ವರೂಪವನು,
ಅದರ ಅವಾಂತರ ಸ್ಥಲಭೇದಂಗಳನು,
ಲೇಸಾಗಿ ಉಪದೇಶಿಸಿ ಆಮೇಲೆ,
ಪರಜಂಗಮವೆ ಮುಖ್ಯವಾದ,
ಶರಣ್ಯವಾದುದರಿಂದೆ ಕೃತ್ಯನಾದ
ಮಾಹೇಶ್ವರಂಗೆ ಶರಣ್ಯವಾದ
ಪರಜಂಗಮವೆ ಗುರುವು.
ಆ ಗುರುರೂಪವಾದ ಲಿಂಗಕ್ಕೆ
ನವವಿಧ ಸ್ಥಲವಾದುದರಿಂದ
ಉಪಾಸತ್ಯತ್ವವನು ಪ್ರತಿಪಾದಿಸುವದಕ್ಕೋಸುಗ
ಆ ಗುರುಲಿಂಗಧಾರಿಯಾದ ಮಾಹೇಶ್ವರಂಗೆ
ಆಗಮ ಲಿಂಗ ತ್ರಿವಿಧದಿಂದ
ಶೀಲಾಚಾರ ನಿಷ್ಠೆ ಮೊದಲಾದುದನು
ಮಾಹೇಶ್ವರಸ್ಥಲದಲ್ಲಿ ಪ್ರತಿಪಾದಿತವಾಗಿ
ಆಚಾರದ ದೃಢತ್ವದಿಂದವೆ ಲಿಂಗನಿಷ್ಠಾನ್ವಿತತ್ತ್ವವನು
ಕಾಯಲಿಂಗವೆಂಬ ಮೂರರ ಅವಗ್ರಹಣವನು
ಪೂರ್ವಾಶ್ರಯ ನಿರಸನ ಕಡೆಯಾಗುಳ್ಳ
ನಿರಾಸಕತ್ವವು ಆಚಾರಲಿಂಗ ತ್ರಿವಿಧದಿಂದ
ಸರ್ವಗತ ನಿರಾಸಕತ್ವವನು ಶೀವಜಗನ್ಮಯತ್ವವನು ಪ್ರತಿಷ್ಠಸಿ
ಆ ಲಿಂಗದಲ್ಲಿ ‘ಭಕ್ತದೇಹಿಕಲಿಂಗ’ ವೆಂಬ ನಿಶ್ಚಯವನು
ಐಯ್ದಿದ ಒಂಬತ್ತು ಪ್ರಕಾರವಾದ
ಗುರುಲಿಂಗದ ವಿಚಾರವು ಮಾಡಲು ತಕ್ಕುದಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Parajaṅgamasthalakke śirōmaṇiyāda
paripūrṇavādācāraliṅga svarūpavanu,
adara avāntara sthalabhēdaṅgaḷanu,
lēsāgi upadēśisi āmēle,
parajaṅgamave mukhyavāda,
śaraṇyavādudarinde kr̥tyanāda
māhēśvaraṅge śaraṇyavāda
parajaṅgamave guruvu.
Ā gururūpavāda liṅgakke
navavidha sthalavādudarinda
upāsatyatvavanu pratipādisuvadakkōsuga
ā guruliṅgadhāriyāda māhēśvaraṅge
āgama liṅga trividhadinda
Śīlācāra niṣṭhe modalādudanu
māhēśvarasthaladalli pratipāditavāgi
ācārada dr̥ḍhatvadindave liṅganiṣṭhānvitattvavanu
kāyaliṅgavemba mūrara avagrahaṇavanu
pūrvāśraya nirasana kaḍeyāguḷḷa
nirāsakatvavu ācāraliṅga trividhadinda
sarvagata nirāsakatvavanu śīvajaganmayatvavanu pratiṣṭhasi
ā liṅgadalli ‘bhaktadēhikaliṅga’ vemba niścayavanu
aiydida ombattu prakāravāda
guruliṅgada vicāravu māḍalu takkudayya
śāntavīrēśvarā